Rapid ರಶ್ಮಿ ಈಗ `ಡೀಲ್ ರಾಜ'ನ ಗಾಯಕಿ!
Posted date: 11 Wed, May 2016 – 04:49:48 PM

ಕೋಮಲ್ ನಾಯಕನಟನಾಗಿ ನಟಿಸಿರುವ `ಡೀಲ್ ರಾಜ' ಚಿತ್ರ ಮೇಲಿಂದ ಮೇಲೆ ಅನೇಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ. ಈ ಚಿತ್ರಕ್ಕೆ ಅಭಿಮನ್ ರಾಯ್ ಸಂಗೀತ ನೀಡಿ, ಸ್ವತಃ ಅವರೇ ರಚಿಸಿದ್ದ `ನಿನ್ನನ್ನೇ ನಂಬಿರುವೆ ಪದ್ಮಾವತಿ' ಎನ್ನುವ ಹಾಡು ಈಗ ಎಲ್ಲೆಡೆ ಸೂಪರ್ ಹಿಟ್ ಆಗಿದೆ. ಅದರ ಬೆನ್ನಿಗೇ `ಡೀಲ್ ರಾಜ'ನನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ `ಯು/ಎ' ಪ್ರಮಾಣ ಪತ್ರ ನೀಡಿದೆ. ವಿಶೇಷವೆಂದರೆ, ಇಡೀ ಚಿತ್ರದಲ್ಲಿ ಸೆನ್ಸಾರ್ ಮಂಡಳಿಯವರು ಒಂದೇ ಒಂದು ಕಡೆಯೂ ಕತ್ತರಿ ಪ್ರಯೋಗ ಮಾಡಿಲ್ಲ.
    ಅನೇಕ ವಿಶೇಷತೆಗಳನ್ನು ಒಳಗೊಂಡಿರುವ `ಡೀಲ್ ರಾಜ'ನ ಕುರಿತ ಒಂದೊಂದೇ ವಿವರಗಳು ಈಗ ಹೊರಬರುತ್ತಿವೆ. ಇಷ್ಟು ದಿನ ಖಾಸಗಿ ರೇಡಿಯೋ ವಾಹಿನಿಯ ಜಾಕಿಯಾಗಿ ಸಾಕಷ್ಟು ಹೆಸರು ಮಾಡಿದ್ದವರು ರ್‍ಯಾಪಿಡ್ ರಶ್ಮಿ. ಸಿನಿಮಾವೊಂದರಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡ ರಶ್ಮಿ ಈಗ ಗಾಯಕಿಯಾಗಿ ಹೊಸಾ ಅವತಾರವೆತ್ತಿದ್ದಾರೆ.
    `ರಿಂಗ ರಿಂಗ ರಿಂಗ ರಿಂಗ್ ಸ್ವಾಮಿ' ಎನ್ನುವ ಹೊಸ ಬಗೆಯ ಹಾಡಿಗೆ ರ್‍ಯಾಪಿಡ್ ರಶ್ಮಿ ದನಿ ನೀಡಿದ್ದಾರೆ. ಈ ಹಾಡು ಕೂಡಾ ಕೇಳುಗರಿಗೆ ಕಿಕ್ ಕೊಡುವ ಎಲ್ಲ ಸೂಚನೆಯನ್ನೂ ನೀಡಿದೆ. ಇಷ್ಟರಲ್ಲೇ ಈ ಹಾಡು ಯೂ ಟ್ಯೂಬ್ ನಲ್ಲಿ ರಿಲೀಸಾಗಲಿದೆ ಎಂದು ಸ್ವತಃ `ಡೀಲ್ ರಾಜ'ನ ನಿರ್ದೇಶಕ ರಾಜ್‌ಗೋಪಿ ಹೇಳಿದ್ದಾರೆ.
ಎಸ್. ನಾರಾಯಣ್ ಅವರ ಬಳಿ ಸಹಾಯಕರಾಗಿದ್ದ ನಂತರ ಸಡಗರ ಚಿತ್ರವನ್ನು ನಿರ್ದೇಶಿಸಿದ್ದ  ರಾಜ್ ಗೋಪಿ `ಡೀಲ್ ರಾಜ'ನನ್ನು ನಿರ್ದೇಶಿಸಿದ್ದಾರೆ. ರವಿಚಂದ್ರ ರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ಮೇಘಧೂತ್ ಮೂವೀಸ್  ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಭಿಮನ್ ರಾಯ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಕೋಮಲ್ ಜೊತೆಗೆ ನಾಯಕಿಯಾಗಿ ಭಾನುಶ್ರೀ ನಟಿಸಿದ್ದಾರೆ. ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಅವಿನಾಶ್, ಸುಮನ್ ರಂಗನಾಥ್, ಜೈ ಜಗದೀಶ್, ಮಿತ್ರ, ಕುರಿ ಪ್ರತಾಪ್, ಅರುಣ್ ಬಾಲಾಜಿ, ಸುಚಿತ್ರ, ಎಂ.ಎನ್. ಲಕ್ಷ್ಮೀದೇವಿ, ರಾಕ್ ಲೈನ್ ಸುಧಾಕರ್, ಪಂಕಜಮ್ಮ, ಹಂಸತಾಜ್, ಜಂಗ್ಲಿ ಪ್ರಸನ್ನ, ಮಿಮಿಕ್ರಿ ಗೋಪಿ, ಗಣೇಶ್ ರಾವ್, ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ.... ಹೀಗೆ ಕನ್ನಡದ ಬಹುತೇಕ ಖ್ಯಾತ ಪೋಷಕ ಕಲಾವಿದರು, ಹಾಸ್ಯ ನಟರ ದಂಡು `ಡೀಲ್ ರಾಜ'ನಿಗೆ ಸಾತ್ ನೀಡಿದ್ದಾರೆ. ಈ ರಜನಿಕಾಂತ್ ಅವರ ಶಿವಾಜಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ  ಖ್ಯಾತ ತಮಿಳು ನಟ ಬೋಸ್ ವೆಂಕಟ್ ಈ ಚಿತ್ರದಲ್ಲಿ  ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed